ನೆಫ್ರೈಟ್-
	ಆ್ಯಂಫಿಬೋಲ್ ವರ್ಗದ ಕಠಿಣ ಖನಿಜ. ಆ್ಯಕ್ಟಿನೊಲೈಟ್ ಅಥವಾ ಟ್ರೆಮೊಲೈಟ್ ಖನಿಜದ ಸಣ್ಣ ಕಣಗಳಿಂದ ಕೂಡಿದೆ. ಆ್ಯಕ್ಟಿನೊಲೈಟ್ ಕೂಡಿದ್ದಾಗ ನೆಫ್ರೈಟಿನ ಬಣ್ಣ ದಟ್ಟಹಸಿರು, ಟ್ರೆಮೊಲೈಟಿನಿಂದ ಕೂಡಿದ್ದಾಗ ಬಿಳುಪು. ಸಾಕಷ್ಟು ಬಾಳಿಕೆ ಬರುವ ಈ ಖನಿಜ ರತ್ನ ಶಿಲ್ಪಕ್ಕೆ ಯೋಗ್ಯವಾಗಿದೆ. ವಿಗ್ರಹ ಕೆತ್ತನೆ, ಅಲಂಕಾರಿಕ ವಸ್ತು ತಯಾರಿಕೆ ಹಾಗೂ ಕುಂಭ ಕೆಲಸಕ್ಕೆ ಈ ಖನಿಜ ಹೆಚ್ಚು ಪ್ರಶಸ್ತವೆಂದು ಕಂಡುಬಂದಿದೆ.
(ಟಿ.ಆರ್.ಎ.)